ಕ್ರಮ ಸಂಖ್ಯೆ ಸ್ಥಳ ವಿವರಣೆ ಫೋಟೋ
1 ಬಿಸಲೆ ಘಾಟ್ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ, ಬಿಸಲೆಯಲ್ಲಿ 40 ಹೆಕ್ಟೇರುಗಳಷ್ಟು ಮೀಸಲು ಅರಣ್ಯವು ಹರಡಿಕೊಂಡಿದೆ.  ಏಷ್ಯಾದಲ್ಲಿ ಪ್ರಮುಖ ಅರಣ್ಯವೆಂದು ಗುರುತಿಸಲಾಗಿದ್ದು, ಈ ಅರಣ್ಯವು ಹಾಸನ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹರಡಿದೆ.  ಈ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಪುಷ್ಪಗಿರಿ, ಕುಮಾರ ಪರ್ವತ, ಎಣ್ಣೆಕಲ್ಲು, ಪಟ್ಲ, ದೊಡ್ಡಬೆಟ್ಟ ಮತ್ತು ಕನ್ನಡಿಕಲ್ಲು ಎಂದು ಹೆಸರಿಸಲಾದ ಅನೇಕ ಬೆಟ್ಟಗುಡ್ಡಗಳಿವೆ.  ಬಿಸಲೆ ಅರಣ್ಯ ಪ್ರದೇಶದಲ್ಲಿ ತೇಗ, ಬೀಟೆ, ಅಲೆಕ್ಸಾಂಡ್ರಿಯ ಲಾರೆಲ್, ಭಾರತೀಯ ಧೂಪದ ಮರ, ಟ್ಯೂಲಿಪ್, ಮಲಬಾರ್ ಕಿನೋ, ಇನ್ನಿತರೆ ಬಹಳಷ್ಟು ಜಾತಿಯ ಬೆಲೆಬಾಳುವ ಮರಗಳು ಹೇರಳವಾಗಿ ಇವೆ.  ಆನೆಗಳು, ಕಾಡುಕೋಣಗಳು, ಜಿಂಕೆ, ಕಡವೆ, ಕಾಡುಹಂದಿ, ಇನ್ನಿತರೆ ಕಾಡುಪ್ರಾಣಿಗಳು ಹೇರಳವಾಗಿ ಸಿಗುತ್ತವೆ.  ಬಿಸಲೆ ಘಾಟಿನ ಸುತ್ತಮುತ್ತ ಇರುವ ಹಳ್ಳಿಗಳ ಜನರು ಇಲ್ಲಿನ ಸಮೃದ್ಧ ಕಾಡನ್ನು ರಕ್ಷಿಸಿರುತ್ತಾರೆ.  ಬೇಸಿಗೆ ಕಾಲದಲ್ಲಿ ಯಾವಾಗಲಾದರೂ ಕಾಡ್ಗಿಚ್ಚು ಉಂಟಾದರೆ ಸುತ್ತಲಿನ ಹತ್ತಿರದ ಹಳ್ಳಿಗರು ತಕ್ಷಣವೇ ಅದನ್ನು ನಂದಿಸಿ ಕಾಡು ಹೆಚ್ಚಿನ ಹಾನಿಗೊಳಗಾಗುವುದನ್ನು ತಡೆಗಟ್ಟುತ್ತಾರೆ. ಸುತ್ತಲಿನ ಹಳ್ಳಿಗಳ ಜನರು ಕಳ್ಳಕಾಕರು ಮರಗಳನ್ನು ಕಡಿಯುವುದು, ಪ್ರಾಣಿಗಳ ಹತ್ಯೆಗೈಯುವುದು ಮಾಡುವುದಕ್ಕಾಗಿ ಅರಣ್ಯ ಪ್ರದೇಶದೊಳಗೆ ಪ್ರವೇಶಿಸದಂತೆ ನಿರಂತರ ಕಟ್ಟೆಚ್ಚರದಿಂದಿರುತ್ತಾರೆ. b

 

2 ಗೂರೂರು ಅಣೆಕಟ್ಟು ಕಾವೇರಿ ನದಿಯಕಾವೇರಿ ನದಿಯ ಒಂದು ಪ್ರಮುಖ ಉಪನದಿಯಾದ ಹೇಮಾವತಿ ನದಿಗೆ ಅಡ್ಡಲಾಗಿ ಒಂದು ಅಣೆಕಟ್ಟನ್ನು ಕಟ್ಟಲಾಗಿದೆ. ಈ ಅಣೆಕಟ್ಟು ಕರ್ನಾಟಕ ರಾಜ್ಯದ ಹಾಸನದ ಸಮೀಪವಿರುವ ಗೊರೂರಿನಲ್ಲಿದೆ. 1979ರಲ್ಲಿ ಕಟ್ಟಲ್ಪಟ್ಟ ಜಲಾಶಯವು ಹಾಸನ ಜಿಲ್ಲೆಯ ಜನಗಳಿಗೆ ಕುಡಿಯುವ ನೀರಿನ ಹಾಗೂ ನೀರಾವರಿಯ ಉದ್ದೇಶಗಳನ್ನು ಪೂರ್ಣಗೊಳಿಸುತ್ತದೆ. ಹೇಮಾವತಿ ಅಣೆಕಟ್ಟು ಬಹಳ ವಿಶಾಲವಾಗಿದ್ದು, 2810 ಚದರ ಕಿ.ಮೀ. ವಿಸ್ತೀರ್ಣದ ಜಲಾನಯನ ಪ್ರದೇಶವನ್ನು ಆಕ್ರಮಿಸಿದೆ. ಈ ಅಣೆಕಟ್ಟು 4692 ಮೀಟರ್ ಉದ್ದ, 58.5 ಮೀ. ಎತ್ತರವಿದೆ.  ಈ ಅಣೆಕಟ್ಟಿನ ಒಟ್ಟು ಸಂಗ್ರಹಣಾ ಸಾಮರ್ಥ್ಯ 1050.63 mcm.   ಜಲಾಶಯವು 6 ದೊಡ್ಡ ರೇಡಿಯಲ್ ಸ್ಪಿಲ್ ವೇ ತೂಬುಗಳನ್ನು ಹೊಂದಿದೆ. ಒಂದು ಪ್ರಮುಖ ಉಪನದಿಯಾದ ಹೇಮಾವತಿ ನದಿಗೆ ಅಡ್ಡಲಾಗಿ ಒಂದು ಅಣೆಕಟ್ಟನ್ನು ಕಟ್ಟಲಾಗಿದೆ. ಈ ಅಣೆಕಟ್ಟು ಕರ್ನಾಟಕ ರಾಜ್ಯದ ಹಾಸನದ ಸಮೀಪವಿರುವ ಗೊರೂರಿನಲ್ಲಿದೆ.  g

 

3 ಹಾಸನಾಂಭ ದೇವಾಲಯ ಇಲ್ಲಿನ ರಾಜಗೋಪುರವನ್ನು ಹೊಸದಾಗಿ ನಿರ್ಮಾಣಮಾಡಲಾಗಿದೆ. ಈ ಗೋಪುರವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಪ್ರಾಂಗಣದಲ್ಲಿ ಮುಖ್ಯವಾಗಿ ಮೂರು ದೇವಾಲಯಗಳಿವೆ ಅವುಗಳೆಂದರೆ ದರ್ಬಾರ್ ಗಣಪತಿ ದೇವಾಲಯ, ಹಾಸನಾಂಭ ದೇವಾಲಯ ಹಾಗೂ ಸಿದ್ಧೇಶ್ವರ ದೇವಾಲಯ. ಇಲ್ಲಿ ಇನ್ನೊಂದು ಮುಖ್ಯವಾದ ಸ್ಥಳವೆಂದರೆ ಕಳ್ಳಪ್ಪನ ಗುಡಿ. ಇಲ್ಲಿ 3 ವಿಗ್ರಹಗಳಿದ್ದು ಅವುಗಳು ದೇವಾಲಯವನ್ನು ಕಳ್ಳತನ ಮಾಡಲು ಬಂದು ದೇವಿಯ ಅವಕೃಪೆಗೆ ಒಳಗಾದ ಕಳ್ಳರದ್ದು ಎಂದು ಹೇಳುತ್ತಾರೆ. ಹಿಂದೆ ಹಾಸನಕ್ಕೆ ಸಿಂಹಾಸನಪುರಿ ಎಂಬ ಹೆಸರಿತ್ತು ಅದು ಕಾಲಾನಂತರದಲ್ಲಿ ಹಾಸನ ಎಂದಾಗಿದೆ. ಹಿಂದೆ ಸುಮಾರು 12 ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಒಂದು ವಿಗ್ರಹ ಸಿಕ್ಕಿತು ಅದರ ಮುಖ ಮಂದಸ್ಮಿತವನ್ನು ಹೊಂದಿದ್ದರಿಂದ ಹಸನ ಅಂದರೆ ಹಾಸನ ಎಂಬ ಹೆಸರು ಬಂದಿತು ಎಂತಲೂ ಹೇಳುತ್ತಾರೆ. ಇಲ್ಲಿ ದೀಪಾವಳಿಯ ಸಂದರ್ಭದಲ್ಲಿ 12 ದಿನಗಳಕಾಲ ಮಾತ್ರ ದೇವಾಲಯವನ್ನು ತೆರೆಯಲಾಗುತ್ತದೆ. ಇಲ್ಲಿನ ದೇವಾಲಯವನ್ನು ತೆರೆಯಬೇಕಾದರೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಇಲ್ಲಿನ ವಿಷೇಶತೆಯೆಂದರೆ ಇಲ್ಲಿ ಈ ಬಾರಿ ಹಚ್ಚಿದ ದೀಪ ಮುಂದಿನ ವರ್ಷದವರೆಗೂ ಬೆಳಗುತ್ತಿರುತ್ತದೆ ಹಾಗೂ ಹೂವುಗಳೂ ಕೂಡ ತಾಜಾವಾಗಿರುತ್ತದೆ. ಇಲ್ಲಿಗೆ ದಕ್ಷಿಣ ಭಾರತ ಹಾಗೂ ಮಹಾರಾಷ್ಟ್ರದಿಂದ ಭಕ್ತಾದಿಗಳು ಬರುತ್ತಾರೆ. aa

 

4 ಶ್ರವಣಬೆಳಗುಳ

…ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು 150 ಕಿ.ಮೀ ದೂರದಲ್ಲಿ ಪಶ್ಚಿಮೋತ್ತರಕ್ಕೆ ಶ್ರವಣಬೆಳಗೊಳವಿದೆ.  ಈ ಪಟ್ಟಣವು ಸುಮಾರು 2 ಸಹಸ್ರ ವರ್ಷಗಳಿಗೂ ಮೇಲ್ಪಟ್ಟು ಜೈನರ ಕಲೆ, ವಾಸ್ತುಶಿಲ್ಪ, ಧರ್ಮ, ಮತ್ತು ಸಂಸ್ಕೃತಿ ಇವುಗಳ ಪ್ರಮುಖ ಕೇಂದ್ರವಾಗಿದೆ.  ಸುಮಾರು 2 ಸಹಸ್ರ ವರ್ಷಗಳ ಹಿಂದೆ ಜೈನರ ಮಹಾನ್ ಆಚಾರ್ಯರುಗಳಲ್ಲಿ ಅತ್ಯಂತ ಪೂರ್ವಿಕರಾದ ಭಗವಾನ್ ಭದ್ರಬಾಹು ಮುನಿಗಳು ಮಧ್ಯಪ್ರದೇಶದ ಉಜ್ಜಯಿನಿಯಿಂದ ಶ್ರವಣಬೆಳಗೊಳಕ್ಕೆ ತಮ್ಮ ಶಿಷ್ಯರೊಂದಿಗೆ ಬಂದರು.  ಈ ತಪಸ್ವಿಯಿಂದ ಪ್ರಭಾವಿತನಾದ ಭಾರತದ ಬಹುಭಾಗಗಳನ್ನು ಆಳಿದ ಚಕ್ರವರ್ತಿ ಚಂದ್ರಗುಪ್ತ ಮೌರ್ಯನು ತನ್ನ ಮಗನಿಗೆ ರಾಜ್ಯಭಾರವನ್ನು ವಹಿಸಿಕೊಟ್ಟು ಈ ಭಾಗದಲ್ಲಿ ನೆಲೆಸಿದನು.

s

 

5 ಬೇಲೂರು ದೇವಾಲಯ ಹಾಸನದಿಂದ 38 ಕಿ.ಮೀ.ದೂರದಲ್ಲಿ ಯಗಚಿ ನದಿಯ ದಂಡೆಯ ಮೇಲಿರುವ ಬೇಲೂರು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ.  ಬೇಲೂರು ಹಿಂದೆ ಹೊಯ್ಸಳರ ರಾಜಧಾನಿಯಾಗಿದ್ದಿತು.  ಇತಿಹಾಸದ ಬೇರೆ ಬೇರೆ ಕಾಲದಲ್ಲಿ ವೇಲಾಪುರ, ವೇಲೂರು ಮತ್ತು ಬೇಲಾಪುರವೆಂಬ ಹೆಸರುಗಳಿಂದ ಕರೆಯಲ್ಪಡುತ್ತಿತ್ತು.  ಹೊಯ್ಸಳ ಶಿಲ್ಪಕಲೆಯ ಅತ್ಯಂತ ಸುಂದರ ಉದಾಹರಣೆಗಳಲ್ಲೊಂದಾದ ಚೆನ್ನಕೇಶವ ದೇವಸ್ಥಾನದಿಂದಾಗಿ ಈ ಪಟ್ಟಣವು ಪ್ರಸಿದ್ಧವಾಗಿದೆ.  ಕ್ರಿ.ಶ.1116ರಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನು ಚೋಳರ ವಿರುದ್ಧ ಸಾಧಿಸಿದ ವಿಜಯದ ದ್ಯೋತಕವಾಗಿ ಈ ದೇಗುಲವನ್ನು ನಿರ್ಮಿಸಿ, ವಿಜಯ ನಾರಾಯಣ ಎಂದು ಕರೆದನು b

 

6 ಹಳೆಬೀಡು ಹಳೇಬೀಡು ದೇವಸ್ಥಾನವು ಹಳೇಬೀಡಿನಲ್ಲಿ ವಿಷ್ಣುವರ್ಧನ ಮತ್ತು ಎರಡನೇ ಬಲ್ಲಾಳ ಇವರುಗಳಿಂದ ನಿರ್ಮಿಸಲ್ಪಟ್ಟಿರುವ ಹೊಯ್ಸಳೇಶ್ವರ ಮತ್ತು ಕೇದಾರೇಶ್ವರ ಜೋಡಿದೇವಸ್ಥಾನಗಳು, ದೇಗುಲ ವಾಸ್ತು ಶಿಲ್ಪಕ್ಕೆ ಇನ್ನೊಂದು ಅತ್ಯುತ್ತಮ ಉದಾಹರಣೆಯಾಗಿದೆ.  ರಾಮಾಯಣ, ಮಹಾಭಾರತ, ಭಾಗವತಗಳಲ್ಲಿನ ದೃಷ್ಟಾಂತಗಳನ್ನು ಈ ದೇಗುಲಗಳ ಹೊರಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಇಲ್ಲಿ ಕಲ್ಲಿನ ಮೇಲೆ ಕೊರೆದಿರುವ ದೃಷ್ಟಾಂತ ಕಥೆಗಳು ಶಿಲ್ಪಕಲೆಯ ದಕ್ಷತೆ, ನೈಪುಣ್ಯತೆ ಎಂಥವರನ್ನೂ ಮರುಳುಗೊಳಿಸುವಂತಿವೆ.  h

 

7 ಮಂಜರಾಬಾದ್ ಕೋಟೆ ಹಾಸನ ಜಿಲ್ಲೆಯು ಹಲವಾರು ವೈಭವೋಪೇತ ಪ್ರವಾಸಿ ಸ್ಥಳಗಳಿಂದ ಕೂಡಿದೆ.  ಹಾಸನ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರಗಳಲ್ಲಿ ಒಂದಾಗಿರುವ ಸಕಲೇಶಪುರವು ಬಹಳಷ್ಟು ಪ್ರಾಕೃತಿಕ ಸ್ಥಳಗಳು ಮತ್ತು ಕಣ್ಣಿಗೆ ಕಟ್ಟುವಂತಹ ನೈಸರ್ಗಿಕ ದೃಶ್ಯಗಳಿಂದ ಮತ್ತು ಮನೋಹರವಾದ ಕಲೆ ಮತ್ತು ವಾಸ್ತುಶಿಲ್ಪಗಳಿಂದ ಕೂಡಿದ ಜನಪ್ರಿಯ ಪ್ರವಾಸಿ ತಾಣಗಳಿಂದ ಕೂಡಿದೆ.  ಈ ಪ್ರದೇಶವು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ, ಆರಾಧಿಸುವ ರಸಿಕರ ಚಿತ್ತವನ್ನು ಆಕರ್ಷಿಸುವ ದಟ್ಟ ಅರಣ್ಯಗಳಿಂದಲೂ, ಬೆಟ್ಟಗುಡ್ಡಗಳಿಂದಲೂ, ನದಿಗಳಿಂದಲೂ, ಜಲಪಾತಗಳಿಂದಲೂ, ನೀರಿನ ಝರಿಗಳಿಂದಲೂ ಮತ್ತು ಗಿರಿಕಂದರಗಳಿಂದಲೂ ಕೂಡಿದೆ.  ಪಶ್ಚಿಮ ಘಟ್ಟಗಳಲ್ಲಿರುವ ಪುಷ್ಪಗಿರಿ, ಬಿಸಲೆ ಅರಣ್ಯ ಶ್ರೇಣಿ, ಹಿರೇಕಲ್ ಗಿರಿ ಶ್ರೇಣಿ, ಮತ್ತು ನಿತ್ಯ ಹರಿದ್ವರ್ಣ ಕಾಡುಗಳು ಪ್ರತಿಯೊಬ್ಬರ ಗಮನವನ್ನು ಸೆಳೆಯುತ್ತವೆ m

 

 

ಮೂಲ : ನಗರಸಭೆ,  ಹಾಸನ ಕರ್ನಾಟಕ ಸರ್ಕಾರ.