ಹಾಸನ ನಗರವು ಕರ್ನಾಟಕ ರಾಜ್ಯದಲ್ಲಿದ್ದು ಬೆಂಗಳೂರಿನಿಂದ  183 ಕೀ ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ 935 ಮೀ ಎತ್ತರದಲ್ಲಿದೆ. ಹವಾಮಾನವು ಬೆಂಗಳೂರಿನ ಹವಾಮಾನಕ್ಕೆ ಸರಿಸಮುವಾಗಿದೆ. 2016 ರಲ್ಲಿ ಸ್ವಚ್ಚ 10 ನಗರಗಳಲ್ಲಿ ಇದು  ಒಂದಾಗಿದೆ. ಹಾಸನವು ಕರ್ನಾಟಕ ರಾಜ್ಯದ ಕಾರ್ಯಸ್ಥಾನ ದಕ್ಷಿಣ ಭಾರತದ ವಿಸ್ತಾರವಾದ  ಆಳ್ವಿಕೆ ಯನ್ನು ಮತ್ತು ಬಲಿಷ್ಟ ಸಾಮಾಜ್ಯವಾದ ಹೂಯ್ಸಳರು ತಮ್ಮ   ಆಳ್ವಿಕೆಯ ಕೇಂದ್ರ ಸ್ಥಾನವನ್ನಾಗಿಸಿಕೋಂಡಿದ್ದರು. ಹಾಸನ ಜಿಲ್ಲೆಯು ಬೇಲೂರು ಅವರ ರಾಜಧಾನಿಯಾಗಿತ್ತು.ಮುಂದೆ ಅವರು 1000-1334 ಕಾಲದಲ್ಲಿ ತಮ್ಮ ರಾಜಧಾನಿಯನ್ನು ಹಳೆಬೀಡಿಗೆ ವರ್ಗಾಯಿಸಿಕೂಂಡರು. ಇಂದು ಹಾಸನ ಜಿಲ್ಲೆಯು ತನ್ನ ಹೂಯಸ್ಳ ವಾಸ್ತು ಶಿಲ್ಪಕ್ಕಾಗಿ ಪ್ರಪಂಚದಾದ್ಯಂತ ಪ್ರಖ್ಯಾತವಾಗಿದೆ. ಜಿಲ್ಲೆಯು ಅನೇಕ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಸುಮಾರು 50 ಕ್ಕು ಹೆಚ್ಚು ಶಿಲ್ಪಕಲೆಗಳ ಾಗರಗಳು ಗುರುತಿಸಲ್ಪಟ್ಟಿವೆ.

ಹಾಸನ ನಗರವು 35 ವಾರ್ಡ್ಗಳನ್ನು ಹೋಂದಿದ್ದು  26.5 ಚ ಕೀ ಮೀ ವಿಸ್ತ್ರೀರ್ಣವನ್ನು ಹೋಂದಿದೆ.

 

ಮೂಲ :  ನಗರಸಭೆ,  ಹಾಸನ ಕರ್ನಾಟಕ ಸರ್ಕಾರ.